ಬದುಕಿನಲ್ಲಿ ಸಂತೋಷವಾಗಿರುವುದು…

ನಮ್ಮ ಸುತ್ತಮುತ್ತ ಕೆಲವರು ಸದಾ ಹಸನ್ಮುಖರಾಗಿದ್ದು ಸಂತೋಷದಿಂದಿರುವುದನ್ನು ಕಾಣುತ್ತೇವೆ. ಎಷ್ಟೇ ಕಷ್ಟಗಳು ಬಂದರೂ ಅವರು ನಗುತ್ತಲೇ ಕಷ್ಟಗಳನ್ನು ಸ್ವೀಕರಿಸುತ್ತಾರೆ ಹಾಗೂ ಅವೆಲ್ಲಾ ಸಣ್ಣ ವಿಷಯಗಳೆಂಬಂತೆ ಕಷ್ಟಗಳನ್ನು ಎದುರಿಸುತ್ತಾರೆ ಮತ್ತು ಗೆಲ್ಲುತ್ತಾರೆ. ಇವರು ಸದಾ ಸಂತೋಷವಾಗಿರುವುದು ಹೇಗೆ? ಆ ಮನಃಸ್ಥಿತಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ? ಆ ಹಸನ್ಮುಖದ ರಹಸ್ಯವೇನು? ಸಂತೋಷವೆಂಬುದು ಮನಸ್ಸಿನ ಒಂದು ಸ್ಥಿತಿ. ನಮ್ಮದೇ ಮನಸ್ಸಿನ ಸ್ಥಿತಿ. ಆದ್ದರಿಂದ ಸಂತೋಷವಾಗಿರುವುದು ನಮ್ಮ ಹತೋಟಿಯಲ್ಲಿದೆ. ಯಾವುದೇ ಜಟಿಲತೆ, ಸಮಸ್ಯೆಗಳು ಬಂದರೂ ನಾವು ಸಂತೋಷವಾಗಿಯೇ ಇರುವೆವು ಎಂದು ತೀರ್ಮಾನಿಸಿದರೆ ಎಂತಹ ಪರಿಸ್ಥಿತಿಯಲ್ಲೂ […]

Read more "ಬದುಕಿನಲ್ಲಿ ಸಂತೋಷವಾಗಿರುವುದು…"

ಬದುಕಿನಲ್ಲಿ ಬದಲಾವಣೆ ತರುವುದು ಹೇಗೆ…

ನಮ್ಮ ಬದುಕಿನಲ್ಲಿ ಕಷ್ಟ ಕೋಟಲೆಗಳು ಬರುತ್ತಿರುತ್ತವುದು ಸಾಮಾನ್ಯ. ಬರುವ ಕಷ್ಟಗಳಿಗೆ – ಸಣ್ಣದಿರಲಿ, ದೊಡ್ಡದಿರಲಿ – ನಾವಿರುವ ಪರಿಸ್ಥಿತಿಗಳೇ ಕಾರಣ. ಆ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ನಾವು ಇರುವ ಪರಿಸ್ಥಿತಿಯಿಂದ ಹ… Source: ಬದುಕಿನಲ್ಲಿ ಬದಲಾವಣೆ ತರುವುದು ಹೇಗೆ…

Read more "ಬದುಕಿನಲ್ಲಿ ಬದಲಾವಣೆ ತರುವುದು ಹೇಗೆ…"

ಬದುಕಿನಲ್ಲಿ ಬದಲಾವಣೆ ತರುವುದು ಹೇಗೆ…

ನಮ್ಮ ಬದುಕಿನಲ್ಲಿ ಕಷ್ಟ ಕೋಟಲೆಗಳು ಬರುತ್ತಿರುತ್ತವುದು ಸಾಮಾನ್ಯ. ಬರುವ ಕಷ್ಟಗಳಿಗೆ – ಸಣ್ಣದಿರಲಿ, ದೊಡ್ಡದಿರಲಿ – ನಾವಿರುವ ಪರಿಸ್ಥಿತಿಗಳೇ ಕಾರಣ. ಆ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ನಾವು ಇರುವ ಪರಿಸ್ಥಿತಿಯಿಂದ ಹೊರಬರಬೇಕು. ನಾವು ಪರಿಸ್ಥಿತಿಯನ್ನು ಬದಲಾಯಿಸದಿದ್ದರೆ, ಪರಿಸ್ಥಿತಿಯೇ ನಮ್ಮನ್ನು ಬದಲಾಯಿಸುತ್ತದೆ. ಕಷ್ಟಗಳಿಗೆ ಒಗ್ಗಿಕೊಂಡು ಸಾಗುವುದು ಸುಲಭ ಮಾರ್ಗ. ಸತ್ತ ಮೀನು ಸಹಾ ನೀರಿನ ಹರಿವಿನೊಂದಿಗೆ ಸಾಗುತ್ತದೆ. ಕಷ್ಟಗಳನ್ನು ಎದುರಿಸಿ ನಾವಿರುವ ಪರಿಸ್ಥಿತಿಯನ್ನು ಬದಲಿಸಿ ಜೀವಿಸುವುದು, ನೀರಿನ ಹರಿವಿಗೆ ಎದುರಾಗಿ ಈಜಿ ಗುರಿ ತಲುಪಿದಂತೆ. ನಮ್ಮ ಸದ್ಯದ ಬದುಕಿನಲ್ಲಿ […]

Read more "ಬದುಕಿನಲ್ಲಿ ಬದಲಾವಣೆ ತರುವುದು ಹೇಗೆ…"

ಸ್ವಯಂ ಪ್ರೇರಣೆ – ಗೆಲುವಿನ ಹಾದಿ…

ಪ್ರೇರಣೆ… ಇಂದು…..ಇಂದಿನ ದಿನ ಎಲ್ಲಕ್ಕಿಂತ ಶ್ರೇಷ್ಠವಾದುದು, ಜೀವನದಲ್ಲಿ ಏನಾದರೂ ಮಾಡಬೇಕೆಂದ್ದಿರೆ ಅದರ ಆರಂಭ ಇಂದೇ ಆಗಬೇಕು. ಸಾಧಿಸಬೇಕೆಂದಿರುವುದರಲ್ಲಿ ಗೆಲುವು ಕಾಣಬೇಕೆಂದಿದ್ದರೆ ಅದರತ್ತ ಹೆಜ್ಜೆ – ಎಷ್ಟೇ ಚಿಕ್ಕದಾಗಿರಲಿ – ಇಂದೇ ಇಡಬೇಕು. ಇಂದಿನ ದಿನದ ಗುರಿ ಸಾಧಿಸಬೇಕಾದರೆ ಅದಕ್ಕೆ ಪ್ರೇರೇಪಣೆ ಅತ್ಯವಶ್ಯ. ಇಂದಿನ ದಿನದ ಅವಕಾಶಗಳನ್ನು ಸದುಪಯೋಗಿಸಿಕೊಳ್ಳದಿದ್ದರೆ ಆ ಅವಕಾಶಗಳು ಮತ್ತೆ ಬರಲಾರವು. ಇಂದಿನ ದಿನ ನಿಮಗೆ ಉದಾಸೀನ, ನಿರುತ್ಸಾಹ, ಮುಂದೂಡುವಿಕೆಯ ಮನಃಸ್ಥಿತಿ… ಏನೇ ಇರಲಿ, ಅವನ್ನೆಲ್ಲಾ ಕಿತ್ತೊಗೆಯಲು ಸುಸಮಯ….ಈಗ. ನಿಮ್ಮ ಪ್ರೇರೇಪಣೆಯೇ ನಿಮ್ಮ ಗೆಲುವಿಗೆ ದಾರಿದೀಪ. […]

Read more "ಸ್ವಯಂ ಪ್ರೇರಣೆ – ಗೆಲುವಿನ ಹಾದಿ…"